ಗೋಪಾಲನ್ ಕಸ್ತೂರಿ ( ೧೭ ಡಿಸೆಂಬರ್ ೧೯೨೪ - ೨೧ ಸೆಪ್ಟೆಂಬರ್ ೨೦೧೨) ಇವರು ಒಬ್ಬ ಭಾರತೀಯ ಪತ್ರಕರ್ತರಾಗಿದ್ದು, ಇವರು ೧೯೬೫ ರಿಂದ ೧೯೯೧ ರವರೆಗೆ ದಿ ಹಿಂದೂ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಇವರು ದಿ ಹಿಂದು ಪತ್ರಿಕೆಯ ಮುಖ್ಯಸ್ಥರಾಗಿದ್ದ ಎಸ್. ಕಸ್ತೂರಿ ರಂಗಯ್ಯ ಅಯ್ಯಂಗಾರ್ ಅವರ ಮೊಮ್ಮಗರಾಗಿದ್ದರು. ಚಿಕ್ಕಪ್ಪರಾಗಿದ್ದ ಎಸ್ ಪಾರ್ಥಸಾರಥಿ ಅವರ ನಿಧನದ ನಂತರ ಕಸ್ತೂರಿಯವರು ಪತ್ರಿಕೆಯ ಸಂಪಾದಕರಾದರು. ನಂತರ ಇವರು ಅದೇ ಪತ್ರಿಕೆಯ ಸಂಪಾದಕರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದರು. == ವೈಯಕ್ತಿಕ ಜೀವನ == ಕಸ್ತೂರಿಯವರು ೧೯೨೪ರ ಡಿಸೆಂಬರ್ ೧೭ರಂದು ಮದ್ರಾಸ್ ನ ಕೆ. ಗೋಪಾಲನ್ ಮತ್ತು ರಂಗನಾಯಕಿ ದಂಪತಿಗೆ ಜನಿಸಿದರು. ಇವರು ಕಸ್ತೂರಿ ಕುಟುಂಬದ ಹಿರಿಯರಾದ ಎಸ್. ಕಸ್ತೂರಿ ರಂಗ ಅಯ್ಯಂಗಾರ್ ಅವರ ಮೊಮ್ಮಗ, ಇವರು ಹುಟ್ಟುವ ಒಂದು ವರ್ಷದ ಮೊದಲು ಇವರ ತಾತ ನಿಧನರಾಗಿದ್ದರು. ಇವರು ಮದ್ರಾಸ್‌ನ ಪ್ರೆಸಿಡೆನ್ಸಿ ಕಾಲೇಜಿನಿಂದ ಪದವಿ ಪಡೆದು ಕುಟುಂಬದ ಪತ್ರಿಕೆಯಾದ ದಿ ಹಿಂದೂ ಗೆ ಸೇರಿದರು. ಕಸ್ತೂರಿಯವರು ಕಮಲಾ ಎಂಬವರನ್ನು ವಿವಾಹವಾದರು. ಇವರಿಗೆ ಇಬ್ಬರು: ಕೆ. ಬಾಲಾಜಿ, ಕೆ. ವೇಣುಗೋಪಾಲ್ ಪುತ್ರರು ಮತ್ತು ಮಗಳು : ಲಕ್ಷ್ಮಿ ಶ್ರೀನಾಥ್. ಕಸ್ತೂರಿಯವರ ಹಿರಿಯ ಸಹೋದರಾದ ಜಿ. ನರಸಿಂಹನ್ ಅವರು ೧೯೫೯ ರಿಂದ ೧೯೭೭ ರವರೆಗೆ ದಿ ಹಿಂದೂ ಪತ್ರಿಕೆಯ ವ್ಯವಸ್ಥಾಪಕ-ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. == ಸಂಪಾದಕತ್ವ == ೧೯೬೫ ರಲ್ಲಿ ದಿ ಹಿಂದೂ ಪತ್ರಿಕೆಯ ಸಂಪಾದಕರಾದ ಎಸ್. ಪಾರ್ಥಸಾರಥಿಯವರ ಮರಣದ ನಂತರ ಕಸ್ತೂರಿಯವರು ಸಂಪಾದಕರಾದರು. ಕಸ್ತೂರಿಯವರು ೧೯೬೫ ರಿಂದ ೧೯೯೧ ರವರೆಗೆ ಇದರ ಸಂಪಾದಕರಾಗಿ ಸುದೀರ್ಘ ಸೇವೆ ಸಲ್ಲಿಸಿದರು. ಕಸ್ತೂರಿ ಅವರು ೧೯೯೧ ರಲ್ಲಿ ನಿವೃತ್ತರಾದರು ನಂತರ ಎನ್. ರವಿ ಎಂಬುವವರು ಪತ್ರಿಕೆಯ ಅಧಿಕಾರ ವಹಿಸಿಕೊಂಡರು. == ಸಾವು == ಕಸ್ತೂರಿಯವರು ೨೧ ಸೆಪ್ಟೆಂಬರ್ ೨೦೧೨ ರಂದು ತಮ್ಮ ೮೮ ನೇ ವಯಸ್ಸಿನಲ್ಲಿ ಚೆನ್ನೈನಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು. ದಿ ಹಿಂದೂ ಪತ್ರಿಕೆಯ ಸ್ಥಾಪನೆಯ ೧೩೪ ನೇ ವರ್ಷದ ವಾರ್ಷಿಕೋತ್ಸವ ಆದ ಒಂದು ದಿನದ ನಂತರ ನಿಧನರಾದರು. == ಟಿಪ್ಪಣಿಗಳು == ' . . 1966. . 207. == ಉಲ್ಲೇಖಗಳು ==